ನವದೀಪ್ ಸೈನಿ (ಜನನ ೨೩ ನವೆಂಬರ್ ೨೯೯೨). ಇವರು ದೆಹಲಿ ಪರ ಆಡುವ ಭಾರತೀಯ ಕ್ರಿಕೆಟಿಗ. == ಆರಂಭಿಕ ಜೀವನ == ನವದೀಪ್ ಸೈನಿ ೨೩ ರ ನವೆಂಬರ್ ೧೯೯೨ ರಲ್ಲಿ ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದರು. ಇವರ ತಂದೆ ಚಾಲಕ, ಹರಿಯಾಣ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದರು. ಇವರ ಅಜ್ಜ ಕರಮ್ ಸಿಂಗ್, ಸ್ವಾತಂತ್ರ್ಯ ಕಾರ್ಯಕರ್ತ, ಸುಭಾಸ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಭಾಗವಾಗಿದ್ದರು. == ದೇಶೀಯ ವೃತ್ತಿ == ೨೦೧೫-೧೬ ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನವದೀಪ್ ಸೈನಿಯವರು ೨ ಜನವರಿ ೨೦೧೬ ರಂದು ಟ್ವೆಂಟಿ-೨೦ ಗೆ ಪಾದಾರ್ಪಣೆ ಮಾಡಿದರು. ಫೆಬ್ರವರಿ ೨೦೧೭ ರಲ್ಲಿ, ಇವರನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ೨೦೧೭ ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ 10 ಲಕ್ಷಕ್ಕೆ ಖರೀದಿಸಿತು. ಜನವರಿ ೨೦೧೮ ರಲ್ಲಿ, ಇವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦೧೮ ರ ಐಪಿಎಲ್ ಹರಾಜಿನಲ್ಲಿ ೩ ಕೋಟಿಗೆ ಖರೀದಿಸಿತು. ಐಪಿಎಲ್ ೨೦೧೯ ರಲ್ಲಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಇವರು ೨೦೧೭-೧೮ ರ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದರು. ಇವರು ೨೦೧೮-೧೯ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ವಿಕೆಟ್ ಪಡೆದವರಲ್ಲಿ ಪ್ರಮುಖರಾಗಿದ್ದರು, ಎಂಟು ಪಂದ್ಯಗಳಲ್ಲಿ ಹದಿನಾರು ೧೬ ವಿಕೆಟ್ ಪಡೆದಿದ್ದರು. ಅಕ್ಟೋಬರ್ ೨೦೧೮ ರಲ್ಲಿ ಇವರು ೨೦೧೮-೧೯ ರ ದಿಯೋಧರ್ ಟ್ರೋಫಿಗೆ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದರು. ಮುಂದಿನ ತಿಂಗಳು, ೨೦೧೮-೧೯ ರಣಜಿ ಟ್ರೋಫಿಗೆ ಮುಂಚಿತವಾಗಿ ವೀಕ್ಷಿಸಿದ ಎಂಟು ಆಟಗಾರರಲ್ಲಿ ಒಬ್ಬನೆಂದು ಅವರನ್ನು ಹೆಸರಿಸಲಾಯಿತು. == ಅಂತರರಾಷ್ಟ್ರೀಯ ವೃತ್ತಿಜೀವನ == ಜೂನ್ ೨೦೧೮ ರಲ್ಲಿ, ಮೊಹಮ್ಮದ್ ಶಮಿಯ ಬದಲಿಯಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕಾಗಿ ಇವರನ್ನು ಭಾರತದ ಟೆಸ್ಟ್ ತಂಡಕ್ಕೆ ಸೇರಿಸಲಾಯಿತು, ಆದರೆ ಇವರು ಆಡಲಿಲ್ಲ. ೨೦೧೯ ರ ಏಪ್ರಿಲ್‌ನಲ್ಲಿ ಇವರನ್ನು ೨೦೧೯ ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಟ್ಯಾಂಡ್‌ಬೈ ಬೌಲರ್ ಎಂದು ಹೆಸರಿಸಲಾಯಿತು. ಜುಲೈ ೨೦೧೯ ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತದ ಏಕದಿನ ಅಂತರಾಷ್ಟ್ರೀಯ (ಒಡಿಐ) ಮತ್ತು ಟ್ವೆಂಟಿ -20 ಅಂತರಾಷ್ಟ್ರೀಯ (ಟಿ 20 ಐ) ತಂಡಗಳಲ್ಲಿ ಇವರನ್ನು ಹೆಸರಿಸಲಾಯಿತು. == ಉಲ್ಲೇಖಗಳು ==